Now Loading

ಹೆಲಿಪೋರ್ಟ್ ಸ್ಥಳ ವೀಕ್ಷಣೆಗೆ ಆಗಮಿಸಿದ ದೆಹಲಿ ತಂಡl

ಕೊಡಗಿನಲ್ಲಿ ಉದ್ದೇಶಿಸಿರುವ ಏರ್ ಸ್ಟ್ರಾಪ್ ನೊಂದಿಗೆ ಹೆಲಿಪೋರ್ಟ್ ನಿರ್ಮಾಣಕ್ಕೆ ನಿಗದಿಪಡಿಸಲಾಗಿದ್ದ ಕೂಡಿಗೆಯ 47 ಏಕರೆ ಸ್ಥಳ ವೀಕ್ಷಣೆಗೆ ದೆಹಲಿಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ಮತ್ತು ಪ್ರಾಧಿಕಾರಕ್ಕೆ ಒಳಪಡುವ ಪವನ್ ಲಿಮಿಟೆಡ್ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಇಲ್ಲಿನ ಕೃಷಿ ಕ್ಷೇತ್ರದಲ್ಲಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಈ ಯೋಜನೆ ನಡೆಯಲಿದ್ದು ಸ್ಥಳೀಯ ಅಧಿಕಾರಿಗಳೊಡನೆ ಚರ್ಚಿಸಿ ಮಾಹಿತಿ ಪಡೆದುಕೊಂಡರು