Now Loading

ಅದ್ದೂರಿಯಾಗಿ ನಡೆದ ಮುನೇಶ್ವರ ಮತ್ತು ಚೌಡೇಶ್ವರಿ  ಉತ್ಸವ 

ಕುಶಾಲನಗರ ಕೂಡಿಗೆಯಲ್ಲಿರುವ ಬ್ಯಾಡಗೊಟ್ಟ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮುನೇಶ್ವರ ಮತ್ತು ಚೌಡೇಶ್ವರಿ ದೇವಿ ಉತ್ಸವ ಅದ್ದೂರಿಯಾಗಿ ನಡೆಯಿತು.  ಪುನರ್ವಸತಿ ಕೇಂದ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಥಗಿಗೊಂಡಿದ್ದ ಪೂಜೆ ಕೈಂಕರ್ಯ  ದ ಪ್ರಮುಖವಾದ ಹೋಮ ಹವನವನ್ನು ಸಿದ್ದಲಿಂಗಯ್ಯ ನಿಂಗಪ್ಪ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ರಾಜೇಶ್ ನಾಥ್ ಸ್ವಾಮೀಜಿ ನೆರವೇರಿಸಿದರು.ಈ ಸಂದರ್ಭ ಶಾಸಕ ಅಪಚ್ಚು ರಂಜನ್ ಹಾಜರಿದ್ದರು.  ಕೇಂದ್ರದಲ್ಲಿ ಸಂಭವಿಸುತ್ತಿದ್ದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಲು ಈ ಪೂಜೆ ಕಾರ್ಯ ನಡೆಸಲಾಯಿತು.ಪೂಜೆ ಕಾರ್ಯದ ನಂತರ ವಸತಿ ಕೇಂದ್ರದ ನಿವಾಸಿಗಳಿಗೆ ಅನ್ನಸಂತರ್ಪಣೆ ವ್ಯವಸ್ತೆ ಮಾಡಲಾಗಿತ್ತು.