Now Loading

ದುಂಡಳ್ಳಿಯಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ:ಫಸಲು ನಾಶ 

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗಡಿಭಾಗದ ಕಿರಿಬಿಳಾಹ ಮತ್ತು ಚೆನ್ನಾಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.  ಏಕಾಎಕಿ 6-8 ಕಾಡಾನೆಗಳ ಹಿಂಡು ಬೇರ್ಪಟ್ಟು ಕಾಫಿ ತೋಟ,ಭತ್ತದ ಗದ್ದೆಗಳನ್ನು ಮರಿ ಸಮೇತ ಕಳೆದ 15 ದಿನಗಳಿಂದ ದಾಂಧಲೆ ಮಾಡುತ್ತಿದ್ದು, ರಾತ್ರಿ ಕಾವಲು ಕಾಯುವುದಕ್ಕೂ ಗ್ರಾಮಸ್ಥರು ಹೆದರುವಂತಾಗಿದೆ. ಹಾಸನ ಜಿಲ್ಲೆಗೆ ಹೊಂದಿಕೊಂಡಂತಿರುವ ಕಾಫಿ ತೋಟದಿಂದ ಕೊಡಗಿನ ಗಡಿ ದಾಟಿ ಒಳ ನುಸುಳಿಕೊಂಡು ಬರುತ್ತಿದ್ದು, ಈ ಭಾಗದಲ್ಲಿ ಕಂದಕಗಳು ಮುಚ್ಚಿ ಹೋಗಿರುವುದು, ಒಣ ನುಸುಳಿದ ಬಳಿಕ  ಹೊರ ಹೋಗಲಾಗದೆ ಪರದಾಡುತ್ತಾ ಆನೆ ಹಿಂಡುಗಳು ಫಸಲು ನಾಶ ಮಾಡುತ್ತವೆ ಎನ್ನುವುದು ಗ್ರಾಮಸ್ಥರ ಆರೋಪ.