Now Loading

ಸೇತುವೆಯ ಮೇಲ್ಭಾಗದ ಮಧ್ಯದಲ್ಲಿ ಅಪಾಯಕಾರಿ ಹಳ್ಳ:ಸ್ಥಳೀಯರಿಂದ ಹಳ್ಳ ಮುಚ್ಚುವ ಕಾರ್ಯ.

ಸೇತುವೆಯ ಮೇಲ್ಭಾಗದ ಮಧ್ಯದಲ್ಲಿ ಅಪಾಯಕಾರಿ ಹಳ್ಳ:ಸ್ಥಳೀಯರಿಂದ ಹಳ್ಳ ಮುಚ್ಚುವ ಕಾರ್ಯ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಗುಡುಗಳಲೆ ಯಿಂದ ಶನಿವಾರಸಂತೆಗೆ ಹೋಗುವ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದ ಕಾರಣ ವಾಹನ ಸವಾರರಿಗೆ ಹಾಗೂ ಜನರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ ಈ ಗುಂಡಿಯಿಂದ ತುಂಬಾ ತೊಂದರೆ ಆಗುತ್ತಿತ್ತು ಹಾಗೂ ಈ ಗುಂಡಿಯಿಂದ ರಾತ್ರಿ ಹೊತ್ತಿನಲ್ಲಿ ತೆರಳುವ ಬೈಕುಗಳು ಎರಡು ಬಿದ್ದು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿ ಇದ್ದಂತ ಗುಂಡಿಯನ್ನು ಸತತವಾಗಿ ರಾತ್ರಿ ವೇಳೆ ಕೆಲಸ ಮಾಡಿ ರಸ್ತೆ ಮಧ್ಯದಲ್ಲಿದ್ದ ಗುಂಡಿಯನ್ನು ಮುಚ್ಚಿ ವಾಹನ ಸವರರಿಗೆ ಹಾಗೂ ಜನರಿಗೆ ಮಕ್ಕಳಿಗೆ ಉಪಯೋಗ ಹಾಗೂ ಹಾಗೆ ಮಾಡಿದ್ದಾರೆ ,ಸ್ಥಳೀಯರು ನೀಡಿದ ಸಿಮೆಂಟ್, ಜೆಲ್ಲಿ ಕಲ್ಲು ಎಂ ಸೆಂಡ್ ಬಳಸಿ ಅನಾಹುತ ತಪ್ಪಿಸಿ,ಜನಪ್ರತಿನಿಧಿಗಳು ಮಾಡಬೇಕಾದ ಕೆಲಸ ಮಾಡಿ ತೋರಿಸಿದ್ದಾರೆ.