Now Loading

ಕಳೆಗಟ್ಟಿದ ಗಣಪತಿ ಜಾತ್ರಾ ಸಂಭ್ರಮ

ಕುಶಾಲನಗರದಲ್ಲಿ ಸಂಜೆ 6 ಆಗುತ್ತಿದ್ದಂತೆ ಪಟ್ಟಣದ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದತ್ತ ಜನತೆ ಮುಖಮಾಡುತ್ತಾರೆ. ಚುಮುಚುಮು ಚಳಿ ಮೈಯನ್ನು ಆವರಿಸಿಕೊಳ್ಳುತ್ತಿದ್ದಂತೆ ಮೈದಾನದ ಚಿತ್ರಣವೇ ಬದಲಾಗಿಬಿಡುತ್ತದೆ. ಒಂದೆಡೆ ಮರಣಬಾವಿಯಲ್ಲಿ ಬೈಕು, ಕಾರುಗಳ ಆರ್ಭಟವಾದರೆ ಇನ್ನೊಂದೆಡೆ ಸಾಂಸ್ಕೃತಿಕ ವೇದಿಕೆ ರಂಗೇರುತ್ತದೆ.ಪ್ರತಿ ದಿನ ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಲರವ, ಮನೋರಂಜನೆಯ ಕಾರ್ಯಕ್ರಮದಿಂದ ಜನಸಂದಣಿ ಹೆಚ್ಚುತ್ತಲೇ ಇದೆ.