Now Loading

ಬಾರದ ಬಸ್ಸುಗಳು, ಸಂಕಷ್ಟದಲ್ಲಿ ವಿದ್ಯಾರ್ಥಿಗಳು:ಪ್ರತಿಭಟನೆಯ ಎಚ್ಚರಿಕೆ

  ಕುಶಾಲನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಗಳ ಸರಿಯಾದ ಸೇವೆ ಇಲ್ಲದೆ ಅದರಲ್ಲೂ ಕೇಸರಿ ಬಣ್ಣದ ತಡೆ ಸಹಿತ ಬಸ್ ಸೌಲಭ್ಯ ಇಲ್ಲದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ. ಕುಶಾಲನಗರ ಬಸ್ ನಿಲ್ದಾಣ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ  ಕೇಂದ್ರ  ಬಿಂದು ಇಲ್ಲಿನ 9 ಶಟಲ್ ಬಸ್ಸು ಕಶಾಲನಗರದಿಂದ ಸುಂಟಿಕೊಪ್ಪ, ಸುಂಟಿಕೊಪ್ಪದಿಂದ ಮಡಿಕೇರಿ ಈ ಮಾರ್ಗದಲ್ಲಿ ದಿನನಿತ್ಯ 80 ಬಾರಿ  ಸಂಚರಿಸುತ್ತಿದ್ದವು ಆದರೆ  ಕೆಲವು ದಿನಗಳಿಂದ ಸಂಚಾರ ಕಡಿಮೆಯಾಗಿದ್ದು ವಿದ್ಯಾರ್ಥಿಗಳ ಕಷ್ಟ ಹೇಳ ತೀರದಂತಾಗಿದೆ.  ತಕ್ಷಣವೇ ಬಸ್  ಸೌಕರ್ಯ  ಸರಿ  ಮಾಡದಿದ್ದಲ್ಲಿ ಪ್ರತಿಭಟನೆ  ನಡೆಸುವ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ.