30 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿಗೆ ಭೂಮಿಪೂಜೆ
ಭದ್ರಾವತಿ: ನಗರದ 7ನೇ ವಾರ್ಡಿನ ಚಟ್ ಪಟ್ ನಗರದಲ್ಲಿ 30ಲಕ್ಷ ವೆಚ್ಚದ ಸಿಸಿರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿತು. ಕಾಮಗಾರಿಗೆ ನಗರಸಭೆ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಶ್ರೀ ಬಿ.ಕೆ ಮೋಹನ್ ಮತ್ತು ನಗರಸಭೆ ಉಪಾಧ್ಯಕ್ಷರಾದ ಶ್ರೀ ಚನ್ನಪ್ಪ ಚಾಲನೆ ನೀಡಿದರು. ಜೊತೆಗೆ ವಾರ್ಡಿನ ಮಹಿಳೆಯರು ಹಾಗೂ ನಗರಸಭೆ ಸದಸ್ಯರಾದ ಶ್ರೀ ಬಿ.ಕೆ ಮೋಹನ್ ಅವರ ಪುತ್ರ ಶ್ರೀ ಮಂಜುನಾಥ್ ಪೀಕು ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದು ವಾರ್ಡಿನ ನಾಗರೀಕರಿಂದ ಸನ್ಮಾನಕ್ಕೆ ಪಾತ್ರರಾದರು. ಭದ್ರಾವತಿ: ಈ ಸಂದರ್ಭ ನಗರಸಭೆಸ್ಥಾಯಿ ಸಮಿತಿ ಅಧ್ಯಕ್ಷರಾದ ಸುದೀಪಕುಮಾರ್, ನಗರಸಭೆ ಉಪಾಧ್ಯಕ್ಷರಾದ ಶ್ರೀ ಚನ್ನಪ್ಪ. ಸದಸ್ಯರಾದ ಶ್ರೀ ಬಿ.ಕೆ ಮೋಹನ್,ಮಂಜುನಾಥ್ ವಾರ್ಡಿನ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.